DhurandharDhurandhar

Dhurandhar Becomes 2025’s Highest-Grossing Film Worldwide, ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ‘ಕಾಂತಾರ: ಚಾಪ್ಟರ್ 1’ ದಾಖಲೆಗೆ ಅಂತ್ಯ; ‘ಧುರಂಧರ್’ ನೂತನ ದಾಖಲೆ

ರಣವೀರ್ ಸಿಂಗ್ ಅಭಿನಯದ ಧುರಂಧರ್’ ಸಿನಿಮಾ 2025ರ ಅತಿ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದ ಚಿತ್ರವಾಗಿ ಹೊರಹೊಮ್ಮಿದೆ. ಈ ಚಿತ್ರದ ವಿಶ್ವಮಟ್ಟದ ಒಟ್ಟು ಗಳಿಕೆ ಸುಮಾರು 935 ಕೋಟಿ ರೂ. ತಲುಪಿದ್ದು, ಇದುವರೆಗೆ ದಾಖಲೆ ಹೊಂದಿದ್ದ ಕಾಂತಾರ: ಚಾಪ್ಟರ್ 1’ ಚಿತ್ರದ ದಾಖಲೆಯನ್ನು ಮುರಿದಿದೆ.

ಅಲ್ಪಾವಧಿಯಲ್ಲೇ ಭರ್ಜರಿ ಪ್ರದರ್ಶನ ನೀಡಿರುವ ‘ಧುರಂಧರ್’ ಶೀಘ್ರದಲ್ಲೇ 1000 ಕೋಟಿ ಕ್ಲಬ್ ಸೇರಿಕೊಳ್ಳುವ ಎಲ್ಲಾ ಸಾಧ್ಯತೆಗಳು ಇದ್ದು, ಚಿತ್ರತಂಡಕ್ಕೆ ಸಿನಿ ವಲಯದಿಂದ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ.

ರಿಷಬ್ ಶೆಟ್ಟಿ ಅಭಿನಯ ಮತ್ತು ನಿರ್ದೇಶನದ ಕಾಂತಾರ: ಚಾಪ್ಟರ್ 1’ ಸಿನಿಮಾ ಈ ವರ್ಷದ ಸೂಪರ್ ಹಿಟ್ ಆಗಿದ್ದು, ವಿಶ್ವದಾದ್ಯಂತ ಸುಮಾರು 850 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಆದರೆ ಇದೀಗ ಆ ದಾಖಲೆಯನ್ನು ‘ಧುರಂಧರ್’ ಮುರಿದು ಹೊಸ ಮೈಲಿಗಲ್ಲು ಸ್ಥಾಪಿಸಿದೆ.

‘ಧುರಂಧರ್’ ಸಿನಿಮಾ ಈಗಾಗಲೇ 900 ಕೋಟಿ ರೂ. ಗಡಿ ದಾಟಿದ್ದು, ಭಾರತದ ಬಾಕ್ಸ್ ಆಫೀಸ್‌ನಲ್ಲಿ ಮಾತ್ರವೇ ಸುಮಾರು 600 ಕೋಟಿ ರೂ. ಗಳಿಕೆ ಸಾಧಿಸಿದೆ. ಕೆಲವು ದೇಶಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ನಿರ್ಬಂಧ ಇದ್ದರೂ ಸಹ ಕಲೆಕ್ಷನ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನುವುದು ವಿಶೇಷ.

ಚಿತ್ರ ಬಿಡುಗಡೆಯ 20ನೇ ದಿನವೂ ಭಾರತದಲ್ಲಿ 17 ಕೋಟಿ ರೂ. ಗಳಿಕೆ ಮಾಡಿದ್ದು, ಮುಂದಿನ ವೀಕೆಂಡ್ ಒಳಗೆ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಸಾವಿರ ಕೋಟಿ ರೂ. ತಲುಪುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ 2025ರ ಮೊದಲ 1000 ಕೋಟಿ ಕ್ಲಬ್ ಸಿನಿಮಾ ಎನ್ನುವ ಗೌರವವೂ ‘ಧುರಂಧರ್’ ಪಾಲಾಗುವ ನಿರೀಕ್ಷೆಯಿದೆ.

ರಣವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಆದಿತ್ಯ ಧಾರ್ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಆರಂಭದಲ್ಲಿ ಕೆಲವೊಂದು ನೆಗೆಟಿವ್ ಪ್ರತಿಕ್ರಿಯೆಗಳು ಬಂದರೂ, ಬಾಕ್ಸ್ ಆಫೀಸ್‌ನಲ್ಲಿ ‘ಧುರಂಧರ್’ ಗೆಲುವಿನ ನಗೆ ಬೀರಿದೆ.

Leave a Reply

Your email address will not be published. Required fields are marked *