Bangalore Metro New Rules
Bangalore Metro New Rules: Loud Mobile Use, Reels and Eating Banned; Over 7,400 Cases Booked, ಮೆಟ್ರೋ ಹೊಸ ನಿಯಮಗಳು: ಪ್ರಯಾಣಿಕರೇ ಇನ್ಮುಂದೆ ರೀಲ್ಸ್ ನೋಡೋ ಮುನ್ನ ಎಚ್ಚರ!
ಬೆಂಗಳೂರು ಮೆಟ್ರೋದಲ್ಲಿ (Bangalore Metro) ಪ್ರಯಾಣಿಸುವವರು ಇನ್ಮುಂದೆ ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ಮೆಟ್ರೋದಲ್ಲಿ ಜೋರಾಗಿ ಮೊಬೈಲ್ ಬಳಕೆ, ರೀಲ್ಸ್ ಅಥವಾ ಯೂಟ್ಯೂಬ್ ವೀಕ್ಷಣೆ, ಫೋನ್‌ನಲ್ಲಿ ಗಟ್ಟಿಯಾಗಿ ಮಾತನಾಡುವುದು, ಊಟ–ತಿಂಡಿ ಸೇವನೆ ಹಾಗೂ ತಂಬಾಕು ಬಳಕೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಈ ನಿಯಮಗಳನ್ನು ಉಲ್ಲಂಘಿಸಿದರೆ ದಂಡದ ಜೊತೆಗೆ ಪ್ರಕರಣವೂ ದಾಖಲಾಗಲಿದೆ. ಸಹ ಪ್ರಯಾಣಿಕರಿಗೆ ತೊಂದರೆ ಆಗದಂತೆ ಶಿಸ್ತು ಕಾಪಾಡುವ ಉದ್ದೇಶದಿಂದ ಈ ಕ್ರಮ ಜಾರಿಗೊಳಿಸಲಾಗಿದೆ.
ಬೆಂಗಳೂರು, ಡಿಸೆಂಬರ್ 30:
ಮೆಟ್ರೋ ಪ್ರಯಾಣದ ವೇಳೆ ಸಾರ್ವಜನಿಕ ಶಾಂತಿ ಭಂಗವಾಗದಂತೆ ನೋಡಿಕೊಳ್ಳಲು ಅಧಿಕಾರಿಗಳು ಹೊಸ ಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಮೆಟ್ರೋ ರೈಲು ಹಾಗೂ ನಿಲ್ದಾಣಗಳಲ್ಲಿ ರೀಲ್ಸ್ ನೋಡುವುದು, ಮೊಬೈಲ್‌ನ ವಾಲ್ಯೂಮ್ ಜಾಸ್ತಿ ಇಟ್ಟುಕೊಳ್ಳುವುದು, ಬ್ಲೂಟೂತ್ ಬಳಸಿ ಜೋರಾಗಿ ಮಾತನಾಡುವುದು ಅಥವಾ ಆಹಾರ ಸೇವಿಸುವುದನ್ನು ನಿಷೇಧಿಸಲಾಗಿದೆ. ನಿಯಮ ಮೀರಿ ವರ್ತಿಸಿದರೆ ತಕ್ಷಣವೇ ದಂಡ ವಿಧಿಸಿ, ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
ಮೆಟ್ರೋ ಪ್ರತಿದಿನ ಲಕ್ಷಾಂತರ ಜನರಿಗೆ ವೇಗದ ಪ್ರಯಾಣ ಸೌಲಭ್ಯ ಒದಗಿಸುತ್ತಿದೆ. ಆದರೆ ಕೆಲವರು ಹೆಡ್‌ಫೋನ್ ಇಲ್ಲದೆ ರೀಲ್ಸ್, ಯೂಟ್ಯೂಬ್ ವೀಕ್ಷಿಸುವುದು, ಗಟ್ಟಿಯಾಗಿ ಮಾತನಾಡುವುದರಿಂದ ಇತರ ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಇದನ್ನು ನಿಯಂತ್ರಿಸಲು ದಂಡಾತ್ಮಕ ಕ್ರಮಕ್ಕೆ ಮುಂದಾಗಲಾಗಿದೆ.
ಡಿಸೆಂಬರ್ 5ರಿಂದ 25ರವರೆಗಿನ ಅಂಕಿಅಂಶಗಳ ಪ್ರಕಾರ, ಜೋರಾಗಿ ಸೌಂಡ್ ಬಳಸಿದ ಪ್ರಕರಣಗಳಲ್ಲಿ 6,520 ಕೇಸ್ ದಾಖಲಾಗಿವೆ. ಮೆಟ್ರೋದಲ್ಲಿ ತಿಂಡಿ ಸೇವಿಸಿದವರ ವಿರುದ್ಧ 268 ಪ್ರಕರಣಗಳು, ತಂಬಾಕು ಬಳಕೆಗೆ ಸಂಬಂಧಿಸಿದಂತೆ 641 ದೂರುಗಳು ದಾಖಲಾಗಿವೆ. ಒಟ್ಟಾರೆ 20 ದಿನಗಳಲ್ಲಿ 7,429 ಪ್ರಕರಣಗಳು ದಾಖಲಾಗಿವೆ ಎಂದು ಮೆಟ್ರೋ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶ್ವಂತ್ ಚೌವ್ಹಾಣ್ ಮಾಹಿತಿ ನೀಡಿದ್ದಾರೆ.
ಈ ಹೊಸ ನಿಯಮಗಳ ಬಗ್ಗೆ ಪ್ರತಿಕ್ರಿಯಿಸಿರುವ ಮೆಟ್ರೋ ಪ್ರಯಾಣಿಕರು, ಶಾಂತಿಯುತ ಹಾಗೂ ಸುಗಮ ಪ್ರಯಾಣಕ್ಕಾಗಿ ಅಧಿಕಾರಿಗಳ ನಿರ್ಧಾರವನ್ನು ಸ್ವಾಗತಿಸುತ್ತೇವೆ ಎಂದು ತಿಳಿಸಿದ್ದಾರೆ.
Pregnant Woman Killed Over Dowry in Rajasthan’s Dholpur, In-Laws Secretly Perform Last Rites, ವರದಕ್ಷಿಣೆಗಾಗಿ ನಾಲ್ಕು…
Monkeys Found Dead in Tumakuru Forest, Poisoning Suspected in Devarayanadurga, ತುಮಕೂರಿನಲ್ಲಿ 11 ಮಂಗಗಳ ನಿಗೂಢ ಸಾವು:…
T20 World Cup 2026 Preparation: Lasith Malinga Joins Sri Lanka Team in New Role, T20…
Bigg Boss Kannada 12: Gilli Fans Troll Malu Nipanal on Stage, Video Goes Viral, ವೇದಿಕೆ…
Bengaluru New Year 2026: Traffic Curbs, Metro Closures and What’s Open, ಹೊಸ ವರ್ಷಾಚರಣೆ: ಬೆಂಗಳೂರು ಸೇರಿದಂತೆ…
New Year Celebrations 2026: Bengaluru Police Step Up Security Measures, ಹೊಸ ವರ್ಷಕ್ಕೆ ಕೌಂಟ್ಡೌನ್: ಖಾಕಿ ಅಲರ್ಟ್;…
View Comments