Monkeys Found Dead in Tumakuru Forest
Monkeys Found Dead in Tumakuru Forest, Poisoning Suspected in Devarayanadurga, ತುಮಕೂರಿನಲ್ಲಿ 11 ಮಂಗಗಳ ನಿಗೂಢ ಸಾವು: ವಿಷಪ್ರಾಶನ ಶಂಕೆ
ತುಮಕೂರಿನ ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ 11 ಮಂಗಗಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಆತಂಕ ಮೂಡಿಸಿದೆ. ಮಂಗಗಳು ವಿಷಪ್ರಾಶನದಿಂದಲೇ ಮೃತಪಟ್ಟಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಅರಣ್ಯ ಇಲಾಖೆ ವ್ಯಾಪಕ ತನಿಖೆ ಆರಂಭಿಸಿದೆ.
ದೇವರಾಯನದುರ್ಗ–ದುರ್ಗದ ಹಳ್ಳಿ ನಡುವಿನ ಅರಣ್ಯ ಪ್ರದೇಶದಲ್ಲಿ ಕಳೆದ ಎರಡು ದಿನಗಳಲ್ಲಿ ಮಂಗಗಳ ಮೃತದೇಹಗಳು ಪತ್ತೆಯಾಗಿವೆ. ಸ್ಥಳೀಯರಿಂದ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ಶೋಧ ಕಾರ್ಯ ಕೈಗೊಂಡಿದ್ದು, ಮೊದಲ ದಿನ ಏಳು ಹಾಗೂ ಎರಡನೇ ದಿನ ನಾಲ್ಕು ಮಂಗಗಳ ಮೃತದೇಹಗಳನ್ನು ಪತ್ತೆಹಚ್ಚಿದ್ದಾರೆ. ಪತ್ತೆಯಾದ 11 ಮೃತದೇಹಗಳಲ್ಲಿ ಒಂಬತ್ತು ಸಾಮಾನ್ಯ ಮಂಗಗಳು ಮತ್ತು ಎರಡು ಲಂಗೂರ್‌ಗಳು ಸೇರಿವೆ.
ಪ್ರಾಥಮಿಕ ಮರಣೋತ್ತರ ಪರೀಕ್ಷೆಯಲ್ಲಿ ಮಂಗಗಳು ಯಾವುದೇ ಸೋಂಕು ಅಥವಾ ಕಾಯಿಲೆಯಿಂದ ಮೃತಪಟ್ಟಿಲ್ಲ ಎಂಬುದು ಸ್ಪಷ್ಟವಾಗಿದೆ. ಪರೀಕ್ಷೆಯ ವೇಳೆ ಮಂಗಗಳ ಕರುಳಿನಲ್ಲಿ ಆಹಾರ ಪತ್ತೆಯಾಗಿದ್ದು, ವಿಷಪ್ರಾಶನದಿಂದಲೇ ಸಾವು ಸಂಭವಿಸಿರಬಹುದೆಂಬ ಶಂಕೆ ಬಲಗೊಂಡಿದೆ.
ಸಾವಿನ ನಿಖರ ಕಾರಣವನ್ನು ದೃಢಪಡಿಸಲು ಮಂಗಗಳ ಕೆಲವು ಮಾದರಿಗಳನ್ನು ಬೆಂಗಳೂರಿನ ಪಶು ವೈದ್ಯಕೀಯ ವಿದ್ಯಾಲಯ (IAH & VB)ಕ್ಕೆ ರವಾನೆ ಮಾಡಲಾಗಿದೆ. ಈ ಕುರಿತು ತುಮಕೂರು ಪ್ರಾದೇಶಿಕ ವಲಯದ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದು, ದುಷ್ಕೃತ್ಯದ ಸಾಧ್ಯತೆಯೂ ಸೇರಿದಂತೆ ಎಲ್ಲಾ ಆಯಾಮಗಳಿಂದ ತನಿಖೆ ಮುಂದುವರಿದಿದೆ.
ಇತ್ತೀಚೆಗಷ್ಟೇ ಬೆಳಗಾವಿಯಲ್ಲಿ 30 ಕೃಷ್ಣಮೃಗಗಳು ನಿಗೂಢವಾಗಿ ಸಾವನ್ನಪ್ಪಿದ್ದ ಘಟನೆ ಜನರಲ್ಲಿ ಆತಂಕ ಮೂಡಿಸಿದ್ದರೆ, ಇದೀಗ ತುಮಕೂರಿನ ಈ ಘಟನೆ ಅರಣ್ಯ ಜೀವಿಗಳ ಭದ್ರತೆ ಕುರಿತು ಮತ್ತಷ್ಟು ಚಿಂತೆಯನ್ನು ಹೆಚ್ಚಿಸಿದೆ.
Pregnant Woman Killed Over Dowry in Rajasthan’s Dholpur, In-Laws Secretly Perform Last Rites, ವರದಕ್ಷಿಣೆಗಾಗಿ ನಾಲ್ಕು…
T20 World Cup 2026 Preparation: Lasith Malinga Joins Sri Lanka Team in New Role, T20…
Bigg Boss Kannada 12: Gilli Fans Troll Malu Nipanal on Stage, Video Goes Viral, ವೇದಿಕೆ…
Bengaluru New Year 2026: Traffic Curbs, Metro Closures and What’s Open, ಹೊಸ ವರ್ಷಾಚರಣೆ: ಬೆಂಗಳೂರು ಸೇರಿದಂತೆ…
Bangalore Metro New Rules: Loud Mobile Use, Reels and Eating Banned; Over 7,400 Cases Booked,…
New Year Celebrations 2026: Bengaluru Police Step Up Security Measures, ಹೊಸ ವರ್ಷಕ್ಕೆ ಕೌಂಟ್ಡೌನ್: ಖಾಕಿ ಅಲರ್ಟ್;…
View Comments