jailer 2
Shiva Rajkumar confirms his role in Rajinikanths jailer 2 Movie, ಜೈಲರ್ 2’ನಲ್ಲಿ ಶಿವರಾಜ್ ಕುಮಾರ್: ಈ ಬಾರಿ ಕೇವಲ ಅತಿಥಿ ಪಾತ್ರವಲ್ಲ
2023ರಲ್ಲಿ ತೆರೆಕಂಡ ರಜನೀಕಾಂತ್ ನಟನೆಯ ‘ಜೈಲರ್’ ಚಿತ್ರದಲ್ಲಿ ಕನ್ನಡದ ಸೂಪರ್‌ಸ್ಟಾರ್ ಶಿವರಾಜ್ ಕುಮಾರ್ ಅವರ ಪಾತ್ರವೂ ಪ್ರೇಕ್ಷಕರ ಗಮನ ಸೆಳೆದಿತ್ತು. ಅಷ್ಟೇ ಅಲ್ಲ, ‘ಜೈಲರ್’ ಬಿಡುಗಡೆ ಬಳಿಕ ತಮಿಳುನಾಡಿನಲ್ಲಿ ಶಿವಣ್ಣಗೆ ವಿಶೇಷ ಅಭಿಮಾನಿ ವರ್ಗವೂ ನಿರ್ಮಾಣವಾಯಿತು. ಇದೀಗ ‘ಜೈಲರ್ 2’ ಚಿತ್ರ ನಿರ್ಮಾಣ ಹಂತದಲ್ಲಿದ್ದು, ಈ ಭಾಗದಲ್ಲಿಯೂ ತಾವು ನಟಿಸುತ್ತಿರುವುದನ್ನು ಸ್ವತಃ ಶಿವರಾಜ್ ಕುಮಾರ್ ಖಚಿತಪಡಿಸಿದ್ದಾರೆ.
ರಜನೀಕಾಂತ್ ಅಭಿನಯದ ‘ಜೈಲರ್’ 2023ರ ಸೂಪರ್ ಹಿಟ್ ಸಿನಿಮಾಗಳ ಪೈಕಿ ಒಂದಾಗಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಯಶಸ್ಸು ಕಂಡ ಈ ಕಮರ್ಷಿಯಲ್ ಸಿನಿಮಾದಲ್ಲಿ ವಿವಿಧ ಭಾಷೆಗಳ ಖ್ಯಾತ ನಟರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಇಲ್ಲಿ ಅತಿಥಿ ಪಾತ್ರಗಳಿಗೂ ಸಹ ಸೂಕ್ತ ಮಹತ್ವ ನೀಡಲಾಗಿತ್ತು. ಅದರಲ್ಲೂ ಶಿವರಾಜ್ ಕುಮಾರ್ ಅವರ ಪಾತ್ರ ವಿಶೇಷವಾಗಿ ಮೆಚ್ಚುಗೆ ಪಡೆದಿತ್ತು.
ಶಿವರಾಜ್ ಕುಮಾರ್ ಅಭಿನಯದ ‘45’ ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಅದರ ಪ್ರಚಾರಕ್ಕಾಗಿ ನೀಡಿದ ಸಂದರ್ಶನವೊಂದರಲ್ಲಿ ಅವರು ‘ಜೈಲರ್ 2’ ಕುರಿತು ಮಾತನಾಡಿದ್ದಾರೆ. “‘ಜೈಲರ್’ ಸಿನಿಮಾ ಯಾವ ಸ್ಥಳದಲ್ಲಿ ಮುಗಿದಿತ್ತೋ, ಅಂದಿನಿಂದಲೇ ಮುಂದುವರಿಯುತ್ತದೆ. ನನ್ನ ಪಾತ್ರವೂ ಅಲ್ಲಿಂದಲೇ ಆರಂಭವಾಗುತ್ತದೆ. ಇದು ಕೇವಲ ಅತಿಥಿ ಪಾತ್ರವಲ್ಲ; ಅದಕ್ಕಿಂತ ಹೆಚ್ಚು ಮಹತ್ವ ಹೊಂದಿರುವ ಪಾತ್ರ. ಈ ಬಾರಿ ‘ಜೈಲರ್ 2’ನಲ್ಲಿ ನನ್ನ ಪಾತ್ರ ಸಣ್ಣದಾಗಿರುವುದಿಲ್ಲ” ಎಂದು ತಿಳಿಸಿದ್ದಾರೆ.
ಮುಂದುವರೆದು ಮಾತನಾಡಿದ ಅವರು, “ಈಗಾಗಲೇ ಒಂದು ದಿನ ಚಿತ್ರೀಕರಣ ಮಾಡಿದ್ದೇನೆ. ಜನವರಿಯಲ್ಲಿ ಸುಮಾರು ನಾಲ್ಕು ದಿನಗಳ ಕಾಲ ಶೂಟಿಂಗ್ ನಡೆಯಲಿದೆ. ‘ಜೈಲರ್’ ಒಂದು ಯೂನಿವರ್ಸಲ್ ಕಂಟೆಂಟ್ ಇರುವ ಸಿನಿಮಾ. ನಿರ್ದೇಶಕ ನೆಲ್ಸನ್ ರಜನೀಕಾಂತ್ ಅವರನ್ನು ಅತ್ಯಂತ ಚಾತುರ್ಯದಿಂದ ಬಳಕೆ ಮಾಡಿಕೊಂಡಿದ್ದಾರೆ. ಅವರ ವಯಸ್ಸನ್ನೂ ಕಥೆಗೆ ಪ್ಲಸ್ ಆಗುವಂತೆ ಬಳಸಿದ್ದಾರೆ. ಅದಕ್ಕಾಗಿಯೇ ಸಿನಿಮಾ ಎಲ್ಲಾ ರಾಜ್ಯಗಳಲ್ಲೂ ಭರ್ಜರಿ ಯಶಸ್ಸು ಕಂಡಿದೆ. ಆ ಸಿನಿಮಾದ ಭಾಗವಾಗಿರುವುದು ನನಗೆ ಖುಷಿ” ಎಂದಿದ್ದಾರೆ.
‘ಜೈಲರ್’ ಸಿನಿಮಾ ಬ್ಲಾಕ್‌ಬಸ್ಟರ್ ಯಶಸ್ಸು ಗಳಿಸಿತ್ತು. ಇದರಲ್ಲಿ ರಜನೀಕಾಂತ್ ನಿವೃತ್ತ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದರು. ಅವರ ಗೆಳೆಯ ನರಸಿಂಹ ಪಾತ್ರದಲ್ಲಿ ಶಿವರಾಜ್ ಕುಮಾರ್, ಜೊತೆಗೆ ಮೋಹನ್ಲಾಲ್ ಹಾಗೂ ಜಾಕಿ ಶ್ರಾಫ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ತಮನ್ನಾ ಭಾಟಿಯಾ, ರಮ್ಯಾ ಕೃಷ್ಣ ಮತ್ತು ಸುನಿಲ್ ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು. ವಿಲನ್ ಪಾತ್ರದಲ್ಲಿ ನಟಿಸಿದ ವಿನಾಯಗನ್ ಅವರ ಅಭಿನಯವೂ ಭಾರಿ ಮೆಚ್ಚುಗೆ ಪಡೆದಿತ್ತು. ಇದೀಗ ‘ಜೈಲರ್ 2’ ನಿರ್ಮಾಣವಾಗುತ್ತಿದ್ದು, ಈ ಭಾಗದಲ್ಲಿ ನಂದಮೂರಿ ಬಾಲಕೃಷ್ಣ ಕೂಡ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
Pregnant Woman Killed Over Dowry in Rajasthan’s Dholpur, In-Laws Secretly Perform Last Rites, ವರದಕ್ಷಿಣೆಗಾಗಿ ನಾಲ್ಕು…
Monkeys Found Dead in Tumakuru Forest, Poisoning Suspected in Devarayanadurga, ತುಮಕೂರಿನಲ್ಲಿ 11 ಮಂಗಗಳ ನಿಗೂಢ ಸಾವು:…
T20 World Cup 2026 Preparation: Lasith Malinga Joins Sri Lanka Team in New Role, T20…
Bigg Boss Kannada 12: Gilli Fans Troll Malu Nipanal on Stage, Video Goes Viral, ವೇದಿಕೆ…
Bengaluru New Year 2026: Traffic Curbs, Metro Closures and What’s Open, ಹೊಸ ವರ್ಷಾಚರಣೆ: ಬೆಂಗಳೂರು ಸೇರಿದಂತೆ…
Bangalore Metro New Rules: Loud Mobile Use, Reels and Eating Banned; Over 7,400 Cases Booked,…
View Comments