Karnataka News

Mysuru Palace Blast Explained: How a Helium Cylinder Explosion Turned Fatal

Mysuru Palace Blast Explained: How a Helium Cylinder Explosion Turned Fatal, ಮೈಸೂರು ಅರಮನೆ ಮುಂಭಾಗದ ಸ್ಫೋಟ: ಹೀಲಿಯಂ ಸಿಲಿಂಡರ್ ಸ್ಪೋಟದ ಅಸಲಿ ಕಾರಣ ಬಹಿರಂಗ

Mysuru Blast: ಪ್ರಾಥಮಿಕ ತನಿಖೆಯಲ್ಲಿ ಸ್ಪಷ್ಟವಾದ ಸ್ಫೋಟದ ಹಿನ್ನೆಲೆ, ಎಫ್ಐಆರ್ ದಾಖಲಿಸಿದ ಪೊಲೀಸ್ ಇಲಾಖೆ

ಮೈಸೂರು, ಡಿಸೆಂಬರ್ 26:
ಮೈಸೂರು ಅರಮನೆ (Mysuru Palace) ಮುಂಭಾಗದಲ್ಲಿ ಸಂಭವಿಸಿದ ಭೀಕರ ಹೀಲಿಯಂ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸಲಿ ಕಾರಣ ಇದೀಗ ಬಹಿರಂಗವಾಗಿದೆ. ಬಲೂನ್ ವ್ಯಾಪಾರಿ ಸಲೀಂ ಅವರ ಸಾವಿಗೆ ಕಾರಣವಾದ ಈ ದುರ್ಘಟನೆಯ ಕುರಿತು ಮೈಸೂರು ಪೊಲೀಸರು ಎಫ್‌ಐಆರ್ ದಾಖಲಿಸಿ, ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಸಲೀಂ ನಿರಂತರವಾಗಿ ಬಲೂನ್‌ಗಳಿಗೆ ಹೀಲಿಯಂ ಗ್ಯಾಸ್ ತುಂಬುತ್ತಿದ್ದ ವೇಳೆ ಸಿಲಿಂಡರ್ ಅನ್ನು ವೇಗವಾಗಿ ಮತ್ತೆಮತ್ತೆ ಆನ್–ಆಫ್ ಮಾಡಿದ್ದರಿಂದ ಒಳಭಾಗದಲ್ಲಿ ತೀವ್ರ ತಾಪಮಾನ (Heat) ಹಾಗೂ ಒತ್ತಡ (Pressure) ಹೆಚ್ಚಾಗಿದೆ. ಇದೇ ಕಾರಣದಿಂದ ಏಕಾಏಕಿ ಸಿಲಿಂಡರ್ ಸ್ಪೋಟಗೊಂಡಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

ಉತ್ತರ ಪ್ರದೇಶದಿಂದ ಮೈಸೂರಿಗೆ ಬಂದಿದ್ದ ಸಲೀಂ

ಉತ್ತರ ಪ್ರದೇಶ ಮೂಲದ ಸಲೀಂ ಕಳೆದ ಒಂದು ವಾರದ ಹಿಂದೆ ವ್ಯಾಪಾರದ ಉದ್ದೇಶದಿಂದ ಮೈಸೂರಿಗೆ ಆಗಮಿಸಿದ್ದ. ಮೈಸೂರು ಅರಮನೆ ಸುತ್ತಮುತ್ತ, ವಿಶೇಷವಾಗಿ ವಸ್ತುಪ್ರದರ್ಶನ ಆವರಣದಲ್ಲಿ ಸೈಕಲ್ ಮೇಲೆ ಹೀಲಿಯಂ ಗ್ಯಾಸ್ ಸಿಲಿಂಡರ್ ಇಟ್ಟುಕೊಂಡು ಬಲೂನ್ ಮಾರಾಟ ಮಾಡುತ್ತಿದ್ದನು.

ಘಟನೆ ನಡೆದ ದಿನ ರಾತ್ರಿ ಸುಮಾರು 8.30ವೇಳೆಗೆ, ವರಾಹ ಗೇಟ್ ಬಳಿ ಬಲೂನ್ ಮಾರಾಟ ಮುಗಿಸಿ, ದೊಡ್ಡಕೆರೆ ಮೈದಾನದ ಎದುರಿನ ಜಯಮಾರ್ತಾಂಡ ಗೇಟ್ ಬಳಿ ಬಂದಾಗ ಈ ದುರ್ಘಟನೆ ನಡೆದಿದೆ.

ನಿರಂತರ ಗ್ಯಾಸ್ ತುಂಬುವ ವೇಳೆ ಸಂಭವಿಸಿದ ಅಪಘಾತ

ಆ ಸಮಯದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಲೂನ್ ಖರೀದಿಗೆ ಸೇರಿದ್ದರಿಂದ ಸಲೀಂ ಸತತವಾಗಿ ಹೀಲಿಯಂ ಗ್ಯಾಸ್ ತುಂಬುತ್ತಿದ್ದ. ಈ ವೇಳೆ ಸಿಲಿಂಡರ್‌ನ ವಾಲ್ವ್ ಅನ್ನು ಅತಿವೇಗವಾಗಿ ಆನ್–ಆಫ್ ಮಾಡಿದ ಪರಿಣಾಮ ಒಳಗೆ ತಾಪಮಾನ ಹೆಚ್ಚಾಗಿ ಒತ್ತಡ ನಿರ್ಮಾಣಗೊಂಡಿದ್ದು, ಪರಿಣಾಮವಾಗಿ ಸಿಲಿಂಡರ್ ಸ್ಪೋಟಗೊಂಡಿದೆ.

ಸ್ಫೋಟದಲ್ಲಿ ಸಲೀಂ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅವನ ಪಕ್ಕದಲ್ಲೇ ನಿಂತಿದ್ದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳಲ್ಲಿ ಒಬ್ಬರಿಗೆ ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆ, ಮೂವರಿಗೆ ಕೆ.ಆರ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪೊಲೀಸ್ ತನಿಖೆ ಮುಂದುವರಿಕೆ

ಈ ಘಟನೆ ಸಂಬಂಧ ಮೈಸೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೀಲಿಯಂ ಸಿಲಿಂಡರ್ ಬಳಕೆ, ಸುರಕ್ಷತಾ ಕ್ರಮಗಳ ಪಾಲನೆ ಹಾಗೂ ವ್ಯಾಪಾರ ಅನುಮತಿಗಳ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

True Lies News Kannada

View Comments

Recent Posts

Pregnant Woman Killed Over Dowry in Rajasthan’s Dholpur, In-Laws Secretly Perform Last Rites

Pregnant Woman Killed Over Dowry in Rajasthan’s Dholpur, In-Laws Secretly Perform Last Rites, ವರದಕ್ಷಿಣೆಗಾಗಿ ನಾಲ್ಕು…

3 months ago

Monkeys Found Dead in Tumakuru Forest, Poisoning Suspected in Devarayanadurga

Monkeys Found Dead in Tumakuru Forest, Poisoning Suspected in Devarayanadurga, ತುಮಕೂರಿನಲ್ಲಿ 11 ಮಂಗಗಳ ನಿಗೂಢ ಸಾವು:…

3 months ago

T20 World Cup 2026 Preparation: Lasith Malinga Joins Sri Lanka Team in New Role

T20 World Cup 2026 Preparation: Lasith Malinga Joins Sri Lanka Team in New Role, T20…

4 months ago

Bigg Boss Kannada 12: Gilli Fans Troll Malu Nipanal on Stage, Video Goes Viral

Bigg Boss Kannada 12: Gilli Fans Troll Malu Nipanal on Stage, Video Goes Viral, ವೇದಿಕೆ…

4 months ago

Bengaluru New Year 2026: Traffic Curbs, Metro Closures and What’s Open

Bengaluru New Year 2026: Traffic Curbs, Metro Closures and What’s Open, ಹೊಸ ವರ್ಷಾಚರಣೆ: ಬೆಂಗಳೂರು ಸೇರಿದಂತೆ…

4 months ago

Bangalore Metro New Rules: Loud Mobile Use, Reels and Eating Banned; Over 7,400 Cases Booked

Bangalore Metro New Rules: Loud Mobile Use, Reels and Eating Banned; Over 7,400 Cases Booked,…

4 months ago